ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸುತ್ತಿರುವುದು ಇಡೀ ಪ್ರಪಂಚದಲ್ಲಿ ಬಂಡವಾಳಶಾಹಿ ಸಾಮ್ರಾಜ್ಯ ನಿರ್ಮಾಣದ ಮಾರ್ಗಸೂಚಿಯಾಗಿದೆ. ಪ್ರಜಾಪ್ರಭುತ್ವ ಅಂಗೀಕಾರ ಮಾಡಿದ ದೇಶಗಳು ಸಹ ಬಂಡವಾಳ ಶಾಹಿ ಆಕ್ರಮಣ ದಲ್ಲಿ ನರಳುತ್ತಿದೆ.
ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದ ಅದೆಷ್ಟೋ ದೇಶಗಳಲ್ಲಿ ಪ್ರಜೆಗಳನ್ನು ಕೇಳುವವರಿಲ್ಲ. ಈ ನಡುವೆ ಪ್ರಜಾಪ್ರಭುತ್ವ ದೇಶಗಳು ಸಹ ಬಂಡವಾಳಶಾಹಿ ಆಕ್ರಮಣಕ್ಕೆ ಸಿಕ್ಕಿ ಪ್ರಜಾಪ್ರಭುತ್ವವನ್ನು ಕಳೆದುಕೊಳ್ಳುತ್ತಿದೆ.
ಇಂಥ ಸಂದರ್ಭದಲ್ಲಿ ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೇರಿಕಕ್ಕೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿರುವುದು ವಿಶ್ವದಲ್ಲಿ ಬಂಡವಾಳ ಶಾಹಿತನ ವಿಜೃಂಭಿಸುತ್ತಿರುವ ರೀತಿ ಬದಲಾಗಬಹುದೇ ವಿನ ಬೇರೇನೂ ಬದಲಾವಣೆ ಸಾಧ್ಯವಿಲ್ಲ.
ಹಾಗಾಗಿ ಡಾಲರ್ ಬೆಲೆ ಹೆಚ್ಚಾಗುತ್ತಿದ್ದು ಅನೇಕ ದೇಶಗಳ ಕರೆನ್ಸಿಗಳು ಇಳಿಮುಖ ವಾಗಿದೆ. ಇದನ್ನು ಸರಿಪಡಿಸುವುದಕ್ಕೆ ಅಮೆರಿಕ ತೆಗೆದುಕೊಳ್ಳುವ ಕ್ರಮಗಳನ್ನು ನೋಡಿ ಉಳಿದ ದೇಶಗಳು ತಮ್ಮ ವಿದೇಶಿ ನೀತಿ ನಿಯಮಾವಳಿಗಳನ್ನು ಬದಲಾಯಿಸಿಕೊಳ್ಳುತ್ತವೆ. ಈ ದಿನ ವಿಶ್ವ ಪರಿವರ್ತನೆಯ ಒಂದು ಸಂದರ್ಭವಾಗುತ್ತವೆ. ಮತ್ತು ಜನಸಾಮಾನ್ಯರಿಗೆ ಯಾವುದೇ ಮಹತ್ವದ ಅನುಕೂಲಗಳು ಸಿಗಲಾರದು.
ಒಂದಷ್ಟು ಬಂಡವಾಳಶಾಹಿ ವ್ಯವಸ್ಥೆ ಬಲಿಷ್ಠವಾಗಿ ನಿರ್ಮಾಣವಾಗುತ್ತದೆ ಮತ್ತು ಶೋಷಿತ ವರ್ಗದ ನರಕವನ್ನು ನಿರ್ಮಿಸಲಾಗುತ್ತಾ ಹೋಗುತ್ತದೆ.
Tags
ಸಾಮಾಜಿಕ