ಆತ್ಮದ ಬಗ್ಗೆ ತಿಳಿಯಬೇಕಿದ್ದ ಮಾಡರ್ನ್ ಅಂಗುಲಿಮಾಲ, ಬುದ್ದನನ್ನು ಹುಡುಕಲು ಹೊರಟ. ಈ ಕಾಲದಲ್ಲಿ ಬುದ್ದನೆಲ್ಲಿರುವನೋ! ಆದರೂ ತಿಳಿಯಬೇಕೆಂದು ಸ್ಮಶಾನದಲ್ಲಿ ಬಂದು ಕುಳಿತ. ಅವನ ಗ್ರಹಚಾರಕ್ಕೆ ಹಾಳಾದ ದೆವ್ವಗಳೂ ಬರಲಿಲ್ಲ! ಯಾರದೋ ಮಾತು ಕೇಳಿ ಸಂಸಾರ ತೊರೆದು ತುಂಡು ಬಟ್ಟೆ ಕಟ್ಟಿಕೊಂಡು ಗುಹೆಯೊಳಗೆ ಬುದ್ದನನ್ನು ಧ್ಯಾನಿಸಿದ. ಮಾಡರ್ನ್ ಬುದ್ದನು ಅಪರೂಪಕ್ಕೆ ಸಿಕ್ಕಿದ ಭಕ್ತನಿಗೆ ಒಲಿದಬಿಟ್ಟ. ಕಣ್‌ತೆರೆದು ನೋಡಲು ನೇರವಾಗಿ ನಿಂತಿದ್ದ ಬುದ್ದನಿಗೆ ಪ್ರಶ್ನೆ ಕೇಳಿದ; ಆತ್ಮ ಇದೆಯೇ, ಇದ್ದರೆ ಎಲ್ಲಿದೆ? ಎಲ್ಲಿಗೆ ಹೋಗುತ್ತದೆ? ಮಾಡರ್ನ್ ಬುದ್ದ ನಾನು ಈ ಹಿಂದಿನ ಮುಗ್ದ ಬುದ್ದನಲ್ಲ. ಕಾಲ ಬದಲಾದಂತೆ ನಾನು ಬದಲಾಗಿದ್ದೇನೆ. ನಿನ್ನ ಪ್ರಶ್ನೆಗೆ ಉದಾಹರಣೆ ಮೂಲಕ ಉತ್ತರಿಸುತ್ತೇನೆ ಎಂದ. ಮಾಡರ್ನ್ ಅಂಗುಲಿಮಾಲ ನಿನ್ನಲ್ಲಿ ಸ್ಮಾರ್ಟ್ ಫೋನ್ ಇದೆಯೇ? ಹೌದು ಅದರಲ್ಲಿ ನೆಟ್‌ಪ್ಯಾಕ್ ಇದೆಯೇ? ಹೌದು ನೆಟ್ ಮುಗಿಯುವರೆಗೆ ಮೊಬೈಲ್ ಉಪಯೋಗಿಸುತ್ತಿಯಾ? ಹೌದು
ನೆಟ್ ಮುಗಿದರೆ ಮೊಬೈಲ್ ಉಪಯೋಗಿಸಿತ್ತಿಯಾ? ಇಲ್ಲ ಅದರ ಗೊಡವೆಗೂ ಹೋಗುವುದಿಲ್ಲ. ಈಗ ತಿಳಿದುಕೊ ಮೊಬೈಲ್‌ನಲ್ಲಿ ನೆಟ್‌ವರ್ಕ್ ಇಲ್ಲದಿದ್ದರೆ ಮೊಬೈಲ್ ಸತ್ತ ದೇಹ. ನೀನು ರೀಚಾರ್ಜ್ ಮಾಡುವ ಮೊದಲು ನೆಟ್ ಇತ್ತು. ಚಾರ್ಜ್ ಖಾಲಿಯಾದಾಗಲೂ ನೆಟ್ ಇತ್ತು. ನಿನಗೆ ಸೀಮಿತವಾಗಿದ್ದ ನೆಟ್ ಖಾಲಿಯಾದರೆ ನೆಟ್ ಇಲ್ಲವೆಂದಲ್ಲ. ಅದೆ ರೀತಿ ಆತ್ಮವು ಮೊದಲಿತ್ತು ಎಲ್ಲಾಕಡೆಯಲ್ಲೂ ಇದೆ. ಈ ಮಾಡರ್ನ್ ಯುಗದಲ್ಲಿ ಆತ್ಮದ ಬಗ್ಗೆ ತಿಳಿಯ ಹೊರಟರೆ ಹುಚ್ಚನಾಗುತ್ತೀಯಾ. ನೆಟ್ ಬಗ್ಗೆ ತಿಳಿದುಕೊ ಬುದ್ದಿವಂತನಾಗ್ತೀಯಾ!
ನೀನಂದುಕೊಂಡಂತೆ ಸ್ಯಾಟಲೈಟ್ ಮುಖೇನ ನಮಗೆ ನೆಟ್ ಸಿಗುತ್ತಿಲ್ಲ! ಟಿಯರ್! ಕಂಪೆನಿಗಳು, ಟಿಯರ್ ೨ ಕಂಪೆನಿಗಳು, ಟಿಯರ್ ೩ ಕಂಪನಿಗಳು ನೆಟ್ ನೀಡುವಲ್ಲಿ ಸಹಕರಿಸುತ್ತವೆ. ಭಾರತೀಯರು ಹೆಚ್ಚಾಗಿ ಬಳಸುವ ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳು ಈ ಫೇಸ್ಬುಕ್, ಗೂಗಲ್, ಮೈಕ್ರೋಸಾಫ್ಟ್, ಅಮೆಝಾನ್ ಈ ಕಂಪನಿಗಳ ಡೇಟಾ ಸೆಂಟರ್ ಎಲ್ಲವೂ ಸಾವಿರಾರು ಕಿಲೋಮೀಟರ್ ದೂರದ ಅಮೆರಿಕದಲ್ಲಿವೆ. ಅಷ್ಟು ದೂರದಿಂದ ವಿಶ್ವದ ಇನ್ನೊಂದೆಡೆಗೆ ಡೇಟಾ ತಲುಪಿಸೋದು ಹೇಗೆಂದರೆ, ಆಪ್ಟ್ಟಿಕಲ್ ಫೈಬರ್ ಕೇಬಲ್ (ಓ.ಎಫ್.ಸಿ) ಮುಖಾಂತರ.
ಇಡೀ ಪ್ರಪಂಚದಲ್ಲಿ ಈ ಕೇಬಲ್ ಜಾಲವನ್ನು ಹರಡಲಾಗಿದೆ. ಈ ಕೇಬಲ್ ಗಳಲ್ಲಿ ಲೈಟ್ ಸಿಗ್ನಲ್‌ಗಳ ಮೂಲಕ ಡೇಟಾ ಕಲಿಸಲಾಗುತ್ತದೆ. ಲೈಟ್‌ನ ವೇಗ ಬೇರೆಲ್ಲಕಿಂತ್ತಲೂ ಅತಿ ಹೆಚ್ಚುಕಮ್ಮಿ ೩ಲಕ್ಷ ಕಿಲೋ ಮೀಟರ್ ಪ್ರತಿ ಸೆಕೆಂಡ್, ಈ ವೇಗದಲ್ಲಿ ರವಾನೆಯಾಗುವುದರಿಂದ ಕ್ಲಿಕ್ ಮಾಡಿದ ಕೂಡಲೇ ಡೇಟಾ ನಮ್ಮ ಸ್ಕಿçÃನ್ ಮೇಲೆ ಕಾಣಿಸಿಕೊಳ್ಳುತ್ತದೆ. ಈ ಕೇಬಲ್ ಅನ್ನು ಸಮುದ್ರದ ಆಳದಲ್ಲಿ, ಭೂಮಿಯ ಆಳದಲ್ಲಿ ಜೋಡಿಸಿ ಹತ್ತಿರದ ಟವರ್‌ಗೆ ಸಂಪರ್ಕ ಕಲ್ಪಸಲಾಗುತ್ತದೆ. ಟವರ್ ನಮ್ಮ ಮೊಬೈಲ್‌ಗೆ ವಿದ್ಯುತ್ ತರಂಗಗಳ ಮೂಲಕ ಡೇಟಾವನ್ನ ರವಾನೆ ಮಾಡುತ್ತೆ. ಈ ತರಂಗಾAತರ ಸೇವೆಯನ್ನೇ ನಾವೆಲ್ಲ ನೆಟ್ ಪ್ಯಾಕ್, ಡೇಟಾ ಪ್ಯಾಕ್, ನೆಟ್ ಈ ರೀತಿ ಕರೆಯೋದು. ಟವರ್‌ನಿಂದ ಡೇಟಾ ಪಡೆಯೋ ಸೇವೆಗೆ ನಾವು ರೀಚಾರ್ಜ್ ಮಾಡಿಕೊಳ್ಳುತ್ತೇವೆ.”
“ನಾವು ವಸ್ತುಗಳನ್ನು ಕೆಜಿ, ಗ್ರಾಂ ಗಳಲ್ಲಿ ಖರೀದಿಸುವಂತೆ, ಡೇಟಾ ವನ್ನು ಕೆ.ಬಿ(ಕಿಲೋ ಬೈಟ್), ಎಮ್.ಬಿ(ಮೆಗಾ ಬೈಟ್)ಜಿ.ಬಿ(ಗಿಗ ಬೈಟ್) ಮಾಪನ ಮಾಡುತ್ತಾರೆ.”
“ ಇಂಟರ್‌ನೆಟ್ ಮಾಲೀಕರು ಯಾರೆಂದರೆ ಐ.ಎಸ್.ಪಿ (ಇಂಟರ್‌ನೆಟ್ ಸರ್ವಿಸ್ ಪ್ರೊವೈಡರ್), ನೀವು ಯಾವ ಕಂಪನಿಯ ಸಿಮ್ ಕನೆಕ್ಷನ್ ತೆಗೆದುಕೊಂಡಿದಿರೋ ಆ ಕಂಪನಿಯೇ ಐ.ಎಸ್.ಪಿ., ಇದನ್ನು ಮೂರು ಹಂತಗಳಲ್ಲಿ ಡಿವೈಡ್ ಮಾಡಲಾಗುತ್ತೆ.
ಮೊದಲ ಹಂತ ಸಮುದ್ರದ ಆಳದಲ್ಲಿ ಕೇಬಲ್ ಹಾಕಿ ಖಂಡ ಖಂಡಗಳನ್ನು ಜೋಡಿಸಿರುವ ಕಂಪನಿಗಳು. ಎರಡನೇ ಹಂತ ರಾಷ್ಟçಮಟ್ಟದಲ್ಲಿ, ಮೂರನೇ ಹಂತ ಸ್ಥಳೀಯ ಮಟ್ಟದಲ್ಲಿ ಕೇಬಲ್ ಟವರ್ ಹಾಕಿರುವ ಕಂಪನಿಗಳು. ನಾವು ಕೊಡುವ ಹಣ ಈ ಕಂಪನಿಗಳ ಮಧ್ಯೆ ಶೇರ್ ಆಗುತ್ತೆ. ಡೇಟಾ ಸೆಂಟರ್‌ಗೂ ಆದಾಯ ಬರುತ್ತೆ.”
“ಟಿಯರ್ ೧ ಕಂಪನಿ-ರಿಲಯನ್ಸ್(ಜಿಯೋ), ಟಿಯರ್ ೨ ಕಂಪನಿ-ಏರ್ಟೆಲ್, ಐಡಿಯಾ ಇತ್ಯಾದಿ.”
ಅಂಗುಲಿಮಾಲ,” ಧನ್ಯವಾದಗಳು ತಂದೆ, ಮಾಡರ್ನ್ ಬುದ್ದ,” ಬುದ್ಧ” ಆತ್ಮದ ಬಗ್ಗೆ ಯೋಚಿಸಬೇಡ. ವರ್ತಮಾನದಲ್ಲಿ ಬದುಕು ಆನಂದ ನಿನ್ನದಾಗುತ್ತದೆ. ಹೆಚ್ಚಿನ ಮಾಹಿತಿಗೆ ನನ್ನನು ಭಜಿಸು” ಅದೃಷ್ಟನಾಗುತ್ತಾನೆ.