ಸಾಗರದಲ್ಲಿ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶ.

ಮಲೆನಾಡಿನ ರೈತರ ನೂರಾರು ಸಮಸ್ಯೆಗಳ ನಡುವೆ ಅಡಿಕೆ ಬೆಳೆಗಾರರ ಸಮಾವೇಶ ಸಾಗರದಲ್ಲಿ ಅದ್ದೂರಿಯಾಗಿ ನಡೆಯಿತು. ಕೇಂದ್ರ ಸಚಿವರು ರಾಜ್ಯ ಸಚಿವರು , ಶಾಸಕರುಗಳು ಎಲ್ಲರೂ ಸೇರಿದ ಸಮಾವೇಶದಲ್ಲಿ,ಮಲೆನಾಡಿನ ರೈತರ ಬದುಕಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಯಿತು. ಅಡಿಕೆ ಮಾನ ಹಾನಿಯಾಗುತ್ತಿರುವ ಬಗ್ಗೆ ಸಮಾವೇಶದಲ್ಲಿ ಭರವಸೆಗಳ ಮಹಾಪೂರವೇ ಹರಿದು ಬಂತು. ಕಾಡು ಪ್ರಾಣಿಗಳ ಕಾಟ, ಹೊಸ ಹೊಸ ರೋಗಗಳ ಸಮಸ್ಯೆಯಿಂದ ಬಳಲುತ್ತಿರುವ ರೈತರಿಗೆ ಆಶಾಕಿರಣವಾಗಿ ರಾಜಕಾರಣಿಗಳು ಮಾತನಾಡಿದರು. 
ರಾಜಕಾರಣಿಗಳ ಮಾತುಗಳು ಕಾರ್ಯರೂಪಕ್ಕೆ ಬರುವಾಗ ಅದೆಷ್ಟು ವರ್ಷಗಳು ಉರುಳುತ್ತದೆಯೋ ಗೊತ್ತಿಲ್ಲ. ಸಮಯದ ಮಿತಿ ಇಲ್ಲದೇ , ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎನ್ನುವ ಭರವಸೆಗಳನ್ನು ಈ ಹಿಂದೆ ಸಿರ್ಸಿಯಲ್ಲಿ ನಡೆದ ಸಮಾವೇಶದಲ್ಲಿ ಹೇಳಲಾಗಿತ್ತು. ಸಿರ್ಸಿಯಲ್ಲಿ 25,000 ಹೆಚ್ಚು ಜನರು ಸೇರಿದ ಸಭೆಯಲ್ಲಿ, ಸಿರ್ಸಿ ಭಾಗದ ರೈತರ ಸಾಲಗಳನ್ನು ಮನ್ನಾ ವ್ಯಾಪ್ತಿಗೆ ಸೇರಿಸಬೇಕೆಂದು ಹೋರಾಟ ಮಾಡಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಏಕೆಂದರೆ ಸಿರ್ಸಿ ಭಾಗದ ಸೊಸೈಟಿ ಅವರು ರೈತರಿಗೆ ನೀಡುತ್ತಿದ್ದ ಸಾಲಗಳು ಸರಕಾರಿ ದಾಖಲೆಯಲ್ಲಿ ನೋಂದಣಿಯಾಗದ ಕಾರಣ ಸಾಲ ಮನ್ನಾದ ವ್ಯಾಪ್ತಿಗೆ ಅವುಗಳನ್ನು ತರಲಾಗಲಿಲ್ಲ. ಹೀಗೆ ಹೋರಾಟಗಳು, ಮತ್ತು ಬೇಡಿಕೆಗಳು ಸ್ಪಷ್ಟವಾಗಿ ಈಡೇರಿಸುವ ರೀತಿಯಲ್ಲಿ ಇರಬೇಕು .


ಅಡಿಕೆ ಹಾನಿಕಾರಕವಲ್ಲವೆನ್ನುವ ಅಂಶವನ್ನು ಮೈಸೂರಿನಲ್ಲಿರುವ ಸೆಂಟ್ರಲ್ ಫುಡ್ ರಿಸರ್ಚ್ ಸಂಸ್ಥೆಗೆ ನೀಡಿ ವರದಿ ತರಿಸಿಕೊಳ್ಳುವ ಮಾತುಗಳನ್ನು  ಮಂತ್ರಿಗಳಾದ ಮಧು ಬಂಗಾರಪ್ಪನವರು ತಿಳಿಸಿದರು. 
ರೈತರು ಬೇಡಿಕೆ ಇಟ್ಟ ಸಮಸ್ಯೆಗಳು ಆದಷ್ಟು ಶೀಘ್ರವಾಗಿ ಕಾಲಮಿತಿಯಲ್ಲಿ ಬಗೆಹರಿಯಲಿ ಎನ್ನುವುದು ಪ್ರಬುದ್ಧವಾಣಿ ಪತ್ರಿಕೆಯ ಆಶಯವಾಗಿದೆ. ಸಭೆಯನ್ನು ಆಯೋಜಿಸಿದ ಅಡಿಕೆ ಬೆಳೆಗಾರರ ಎಲ್ಲಾ ಸಂಘ ಸಂಸ್ಥೆಗಳು ರೈತ ಪರವಾದ ಧ್ವನಿಯಾಗಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳು. ಇದೇ ರೀತಿ ಮಲೆನಾಡಿನಲ್ಲಿ ಭೂ ಒತ್ತುವರಿ ಮತ್ತು ಪರಿಸರವಾದದ ಸಮಸ್ಯೆಗೂ ಸ್ಪಂದಿಸಲಿ ಎನ್ನುವುದು ಜನ ಅಭಿಪ್ರಾಯವಾಗಿದೆ.

Post a Comment

Previous Post Next Post